ಸಾಮೆ ಅಕ್ಕಿ ಗೂಡಾನ್ನ

ನವರಾತ್ರಿ ಹತ್ತಿರ ಬಂದಿದೆ . ಹಬ್ಬದ ಸಂಭ್ರಮ ಒಂದೆಡೆಯಾದರೆ ಹಲವರು ಉಪವಾಸ ವೃತ ಮಾಡುವರು. ನವ ದೇವಿಯರನ್ನು ಪರಿಪರಿಯಾಗಿ ಬೇಡಿ ವರ ಪಡೆವ ವಿದಗಳು ಹಲವು.
ಬನ್ನಿ ಉಪವಾಸ ಮಾಡುವ ಭಕ್ತರಿಗಾಗಿ ನಾವು ಈ ಅಡಿಗೆಯನ್ನು ಮಾಡಿ ಬಡಿಸುವ.
ಸಾಮೆ ಅಕ್ಕಿ ಒಂದು ರೀತಿಯಲ್ಲಿ ಉಪವಾಸದಂದು ಬಳಸಿದರೆ ಮತ್ತೊಂದು ರೀತಿಯಲ್ಲಿ ಈ ಸಿರಿ ಧಾನ್ಯ ನಮ್ಮ ಆರೋಗ್ಯ ಭಾಗ್ಯವನ್ನು ದಯಪಾಲಿಸುತ್ತೆ.  ಸಾಮೆ ಅಕ್ಕಿಯನ್ನು ಲಿಟಲ್ ಮಿಲ್ಲೆಟ್ ಎಂದು ಕರೆಯುವರು. ಈ ಧಾನ್ಯವು ಹಲವು ರೀತಿಯಲ್ಲಿ ಉಪಯೋಗ್ಯಕರವಾಗಿದೆ. ನಮ್ಮ ಮೈಯಲ್ಲಿನ ಹೆಚ್ಚಿನ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಯನ್ನು ತಹಬಂದಿಗೆ ತರಲು ಹಾಗು ಎಲ್ಲ ರೀತಿಯಲ್ಲೂ ಈ ಧನ್ಯ ಸೇವನೆ ಒಳ್ಳೆಯದಾಗಿದೆ.
ಈಗ ನಾವು ಮೊದಲಿಗೆ ನವರಾತ್ರಿ ಸಮಯದಲ್ಲಿ ದೇವರಿಗೆ ಪ್ರಸಾದ ರೀತಿಯಲ್ಲಿ ಮಾಡುವ ಗೂಡಾನ್ನ ಮಾಡುವುದನ್ನು ನೋಡೋಣ.
ಸಾಮೆ ಅಕ್ಕಿ ಗೂಡಾನ್ನ (ಬೆಲ್ಲದ ಅನ್ನ)


ಬೇಕಾಗುವ ಪದಾರ್ಥಗಳು :
ಸಾಮೆ ಅಕ್ಕಿ : ೧ ಲೋಟ
ನೀರು : ೨ ಲೋಟ
ಬೆಲ್ಲ : ೧/೨ ಲೋಟ
ತುಪ್ಪ : ೧/೨ ಲೋಟ
ಹಾಲು : ೧/೨ ಲೋಟ
ಏಲಕ್ಕಿ : ೪ ರಿಂದ ೫
ಗೇರು ಬೀಜ :  ೫ ರಿಂದ ೬
ಒಣ ದ್ರಾಕ್ಷಿ : ೧ ದೊಡ್ಡ ಚಮಚ
ಉಪ್ಪು : ಚಿಟಿಕಿ
ಮಾಡುವ ವಿಧಾನ :
ಸಾಮೆ ಅಕ್ಕಿಯನ್ನು ತೊಳೆದು ೧ ಲೋಟ ಹಾಲು ಮತ್ತು ೧ ಲೋಟ  ನೀರು ಹಾಕಿ ಬೇಯಿಸಿಕೊಳ್ಳಿ.
ಒಂದು ಪಾತ್ರೆಗೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಅದು ಕರಗಿ ಕುದಿಯುವಾಗ  ಬೇಯಿಸಿದ ಸಾಮೆ ಅಕ್ಕಿ ಹಾಕಿ
ಚೆನ್ನಾಗಿ ಕುದಿಸಿ. ಮದ್ಯದಲ್ಲಿ ಸೌಟಿನಿಂದ ತಿರುವುತ್ತಿರಿ . ಅಡಿ ಹಿಡಿಯುವ ಸಾದ್ಯತೆ ಇರುತ್ತದೆ. ಈ ಮಿಶ್ರಣ ಗಟ್ಟಿಯಾಗಿ ಬಂದಂತೆ ಅರ್ಧ ಬಾಗ ತುಪ್ಪ ಹಾಕಿ ಕೆಳಗಿಳಿಸಿ. ತೆಂಗಿನ ತೂರಿ ಸೇರಿಸಿ. ಪುಡಿ ಮಾಡಿದ ಏಲಕ್ಕಿ ಹಾಕಿ ಬೆರೆಸಿ. ಉಳಿದ ತುಪ್ಪದಲ್ಲಿ ದ್ರಾಕ್ಷಿ ಮಾತ್ತು ಗೋಡಂಬಿ ಹಾಕಿ ಅಲಂಕರಿಸಿ ದೇವರಿಗೆ ಅರ್ಪಿಸಿ, ಎಲ್ಲರಿಗು ಹಂಚಿ ತಿನ್ನಿ.

Comments