ಸಾಮೆ ಅಕ್ಕಿ ತೆಂಗಿನಕಾಯಿ ಅನ್ನ
ಬೇಕಾಗುವ ಪದಾರ್ಥಗಳು :
ಸಾಮೆ ಅಕ್ಕಿ ೧ ಕಪ್
ನೀರು : ೨ ಕಪ್
ತೆಂಗಿನ ತುರಿ : ೧ ಕಪ್
ಕೆಂಪು ಮೆಣಸಿನ ಕಾಯಿ : ೨ ರಿಂದ ೩
ಗೋಡಂಬಿ : ೨ ರಿಂದ ೩ ದೊಡ್ಡ ಚಮಚ
ತುಪ್ಪ : ೨ ರಿಂದ ೩ ಚಮಚ
ಸಾಸಿವೆ : ೧ ಸಣ್ಣ ಚಮಚ
ಉದ್ದಿನ ಬೇಳೆ : ೧ ಸಣ್ಣ ಚಮಚ
ಕರಿಬೇವು : ೫ ರಿಂದ ೬ ಎಲೆಗಳು
ಉಪ್ಪು : ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು ೨ ಕಪ್ ನೀರು ಹಾಕಿ ಬೇಯಿಸಿ. ತಣ್ಣಗಾಗಲಿ.
ಒಂದು ಬಾಣಲೆಯಲ್ಲಿ ೧ ಚಮಚೆ ತುಪ್ಪ ಹಾಕಿ ಒಲೆಯ ಮೇಲಿಡಿ. ಅದು ಕರಗಿದಾಗ ಸಾಸಿವೆ, ಉದ್ದಿನ ಬೇಳೆ ಹಾಕಿ.
ಸಾಸಿವೆ ಹೊಟ್ಟಿದ ನಂತರ ಕೆಂಪು ಮೆಣಸಿನ ಕಾಯಿ ಹಾಕಿ ಹುರಿಯಿರಿ. ಇದಕ್ಕೆ ಗೇರುಬೀಜ ಸೇರಿಸಿ.
ನಂತರ ಕರಿಬೇವು ಸೇರಿಸಿ. ಒಂದು ಬಾರಿ ಮೆಲ್ಲಗೆ ತಿರುಗಿಸಿ, ತಣ್ಣಗಾದ ಸಾಮೆ ಅನ್ನ, ಬೇಕಾದಷ್ಟು ಉಪ್ಪು ಸೇರಿಸಿ ಕಲೆಸಿ. ಸಣ್ಣ ಉರಿಯಿರಲಿ. ಈಗ ತುರಿದ ತೆಂಗಿನ ಕಾಯಿ ಸೇರಿಸಿ, ಉಳಿದ ತುಪ್ಪ ಹಾಕಿ ಒಂದು ಬಾರಿ ಎಲ್ಲವನ್ನು ಮಿಶ್ರ ಮಾಡಿ.
ಇದನ್ನು ಬಡಿಸುವ ಪಾತ್ರೆಗೆ ಹಾಕಿ, ಮೇಲಿನಿಂದ ಬೇಕಾದಲ್ಲಿ ಇನ್ನಷ್ಟು ತೆಂಗಿನಕಾಯಿಯಿಂದ ಅಲಂಕರಿಸಿ.
ಸಾಮೆ ಅಕ್ಕಿ ತೆಂಗಿನ ಕಾಯಿ ಅನ್ನ ಸವಿಯಲು ಸಿದ್ದ.

Comments
Post a Comment