ಸಾಮೆ ಅಕ್ಕಿ ಪಾಯಸ :
ಬೇಕಾಗುವ ಪದಾರ್ಥಗಳು :
ಸಾಮೆ ಅಕ್ಕಿ : ೧/೨ ಕಪ್
ಬೆಲ್ಲ : ೧/೨ ಕಪ್
ತೆಂಗಿನ ಕಾಯಿ ತುರಿ : ೧ ಕಪ್
ಏಲಕ್ಕಿ ; ೬
ಗೇರು ಬೀಜ : ೧ ದೊಡ್ಡ ಚಮಚೆ ( ಸಣ್ಣ ತುಂಡುಗಳು)
ಒಣ ದ್ರಾಕ್ಷಿ : ೨ ದೊಡ್ಡ ಚಮಚೆ
ತುಪ್ಪ : ೧ ದೊಡ್ಡ ಚಮಚೆ.
ಮಾಡುವ ವಿಧಾನ :
ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಅದಕ್ಕೆ ಬೆಲ್ಲ ಸೇರಿಸಿ ಕುಡಿಯಲು ಇಡಿ.
ತೆಂಗಿನ ಕಾಯಿ ತುರಿದು ಅದನ್ನ ಮಿಕ್ಷಿಯಲ್ಲಿ ಸ್ವಲ್ಪ ನೀರು ಸೇರಿಸಿ ಅರೆದು ಹಾಲನ್ನು ತೆಗೆದಿಟ್ಟುಕೊಳ್ಳಿ. ( ಎರಡು ಬಾರಿ ಅರೆದು ಹಾಲು ಹಿಂಡಿ ಬೇರೆ ಬೇರೆಯಾಗಿ ತೆಗೆದಿಡಬೇಕು).
ಏಲಕ್ಕಿ ಪುಡಿ ಮಾಡಿಟ್ಟುಕೊಳ್ಳಿ. ಹಾಗೆಯೇ ದ್ರಾಕ್ಷಿ , ಗೆರುಬೀಜವನ್ನು ತುಪ್ಪದಲ್ಲಿ ಹುರಿದುಕೊಲ್ಲಿ.
ಈಗ ಬೆಲ್ಲದಲ್ಲಿ ಕುದಿಯುತ್ತಿರುವ ಸಾಮೆಗೆ ಕಾಯಿಹಾಲು ಬೆರೆಸಿ ಕುದಿಸಿ. ೨ ನಿಮಿಷ ಕುದಿದ ನಂತರ ಪಾಯಸ ಕೆಳಗಿಟ್ಟು, ತುಪ್ಪದಲ್ಲಿ ಕರಿದ ಗೇರು ಬೀಜ ಹಾಗು ದ್ರಾಕ್ಷಿ ಹಾಕಿ. ಎಲ್ಲಕ್ಕಿ ಪುಡಿ ಬೆರೆಸಿ. ಸಾಮೆ ಪಾಯಸ ಸವಿಯಲು ಸಿದ್ದವಾಗಿದೆ.
No comments:
Post a Comment