ಸಾಮೆ ಅಕ್ಕಿ ಖಾರದ ಕಿಚಿಡಿ

ಸಾಮೆ ಅಕ್ಕಿ ಖಾರದ ಕಿಚಿಡಿ 
ಬೇಕಾಗುವ ಪದಾರ್ಥಗಳು :
ಸಾಮೆ ಅಕ್ಕಿ : ೧ ಕಪ್
ಹೆಸರು ಬೇಳೆ : ೧/೨ ಕಪ್
ಸಾರಿನ ಪುಡಿ : ೧ ದೊಡ್ಡ ಚಮಚೆ
ಹುಣಿಸೆ ರಸ : ೧ ದೊಡ್ಡ ಚಮಚೆ
ಉಪ್ಪು : ರುಚಿಗೆ ತಕ್ಕಷ್ಟು
ಕ್ಯಾರೆಟ್ : ೧
ದೊಡ್ಡ ಮೆಣಸಿನ ಕಾಯಿ : ೧
ಬಟಾಣಿ : ೧/೨ ಕಪ್
ತೆಂಗಿನ ತುರಿ : ೨ ದೊಡ್ಡ ಚಮಚೆ ( ಬೇಕಾದಲ್ಲಿ ಮಾತ್ರ )
ತುಪ್ಪ : ೨ ದೊಡ್ಡ ಚಮಚ
ಎಣ್ಣೆ : ೧ ದೊಡ್ಡ ಚಮಚ
ಸಾಸಿವೆ : ೧ ಸಣ್ಣ ಚಮಚ
ಉದ್ದಿನ ಬೇಳೆ : ೧ ಸಣ್ಣ ಚಮಚ
ಇಂಗು : ಚಿಟಿಕೆ
ಅರಸಿನ ಪುಡಿ : ಚಿಟಿಕಿ
ಕರಿಬೇವು : ೮ ರಿಂದ ೧೦ ಎಲೆಗಳು
ಮಾಡುವ ವಿಧಾನ :
ಸಾಮೆ ಅಕ್ಕಿ ಹಾಗು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆ ಯಾಗಿ ಬೇಯಿಸಿ.
ಕ್ಯಾರೆಟ್, ಬಟಾಣಿ ಹಾಗು ದೊಡ್ಡ ಮೆಣಸಿನ ಕಾಯಿಯನ್ನು ಹೆಚ್ಚಿ ಹದವಾಗಿ ಬೇಯಿಸಿ.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ಬೆಂದ ಸಾಮೆ ಅಕ್ಕಿ, ಹೆಸರು ಬೇಳೆ, ಬೇಯಿಸಿದ ಕ್ಯಾರೆಟ್ ಹಾಗು ದೊಡ್ಡ ಮೆಣಸಿನ ಕಾಯಿಯನ್ನು ಹಾಕಿ. ಉಪ್ಪು ಹಾಗು ಬೇಕಾದಷ್ಟುನೀರು ಹಾಕಿ. ಆರಸಿನ ಸೇರಿಸಿ  ಕುಡಿಸಿ.
ಇದಕ್ಕೆ ಹುಣಿಸೆ ರಸ ಹಾಗು ಸಾರಿನ ಪುಡಿ ಹಾಕಿ ೨ ರಿಂದ ೩ ನಿಮಿಷ ಕಾಲ ಕುದಿಸಿ.
ಸಾಸಿವೆ, ಉದ್ದಿನ ಬೇಳೆ, ಇಂಗು, ಕರಿಬೇವಿನ ಒಗ್ಗರಣೆಯನ್ನು ಎಣ್ಣೆಯಲ್ಲಿ ಮಾಡಿ ಕುದಿಯುತ್ತಿರುವ ಕಿಚಿಡಿಗೆ ಸೇರಿಸಿ.
ತುಪ್ಪ ಹಾಗು ತೆಂಗಿನ ಕಾಯಿ ಹಾಕಿ ಕೆಳಗಿಳಿಸಿ ಬಡಿಸುವ ಪಾತ್ರೆಗೆ ವರ್ಗಾಯಿಸಿ.
ಸಾಮೆ ಅಕ್ಕಿ ಖಾರದ ಕಿಚಿಡಿ ತಿನ್ನಲು ಸಿದ್ದವಾಗಿದೆ.


Comments