ಅಮಟೆಕಾಯಿ ಉಪ್ಪಿನಕಾಯಿ :
ಉಪ್ಪಿನಕಾಯಿ ಇಲ್ಲದೆ ಊಟ ಇಲ್ಲ ಎನ್ನೋ ಮಾತು ಈಗಲೂ ಕೆಲವರ ಮನೆಯಲ್ಲಿ ಉಂಟು. ಉಪ್ಪಿನಕಾಯಿಗೂ ಮೊಸರನ್ನಕ್ಕೂ ಎಷ್ಟೊಂದು ನಂಟು ಅಂತೀರಾ. ರುಚಿ ಮಾತ್ರಕ್ಕೆ ಅಲ್ಲ, ಆರೋಗ್ಯಕ್ಕೂ ಒಳ್ಳೇದು. ಮೊಸರನ್ನದ ಒಟ್ಟಿಗೆ ಉಪ್ಪಿನಕಾಯಿ ನೆಂಚಿಕೊಂಡು ತಿನ್ನೋದು. ಮೊಸರು ಹುಳಿಯಾಗಿದ್ದಾರೆ ಉಪ್ಪಿನಕಾಯಿ ಒಟ್ಟಿಗೆ ತಿಂದಾಗ ಮೊಸರಿನ ಹುಳಿ ಅಂಶ ಹೋಗಿಬಿಡುತ್ತೆ. ಜೀರ್ಣಶಕ್ತಿಗೂ ಸಹಾಯಕಾರಿ. ಉಪ್ಪಿನಕಾಯಿಯ ಖಾರಂಶ ನಾವು ತಿಂದ ಜಿಡ್ಡಿನ ಅಂಶವನ್ನು ಕಡಿಮೆ ಮಾಡುತ್ತೆ.
ಉಪ್ಪಿನಕಾಯಿಯನ್ನ ಮಾವಿನಕಾಯಿ ಅಲ್ಲದೆ, ಅಮಟೆಕಾಯಿ, ನೆಲ್ಲಿಕಾಯಿ, ನಿಂಬೆಹಣ್ಣು, ಕರಂಡಕ ಕಾಯಿ ಹೀಗೆ ತರತರದ ಕಾಯಿಗಳನ್ನ ಉಪಯೋಗಿಸಿ ಮಾಡುತ್ತಾರೆ.
ಈಗ ಅಮಟೆಕಾಯಿ ಉಪ್ಪಿನಕಾಯಿ ವಿಧಾನವನ್ನು ನೋಡೋಣ .
ಬೇಕಾಗುವ ಪದಾರ್ಥಗಳು :
ಅಮಟೆಕಾಯಿ : ತುಂಬಾ ಎಳೆಯದಿರಬೇಕು 10 ರಿಂದ 15.
ಉಪ್ಪು : ೩ ದೊಡ್ಡ ಚಮಚ
ಸಾಸಿವೆ : ೧ ದೊಡ್ಡ ಚಮಚ
ಮೆಂತ್ಯ : ೧ ಸಣ್ಣ ಚಮಚ
ಮೆಣಸಿನ ಪುಡಿ : ೨ ದೊಡ್ಡ ಚಮಚ
ಕೊಬ್ಬರಿ ಎಣ್ಣೆ : ೧ ದೊಡ್ಡ ಚಮಚ
ಸಾಸಿವೆ : ೧ ಸಣ್ಣ ಚಮಚ
ಇಂಗು : ಒಂದು ಚೂರು
ಮಾಡುವ ವಿಧಾನ :
ಅಮಟೆಕಾಯಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಬೇಕು. ನಂತರ ಒಂದು ಶುದ್ದವಾದ ಒಣ ಬಟ್ಟೆಯಲ್ಲಿ ಒರೆಸಿ ಸಣ್ಣ ಹೋಳುಗಳಾಗಿ ಹೆಚ್ಚಬೇಕು.
ಮೆಂತ್ಯ ಹಾಗು ಸಾಸಿವೆಯನ್ನು ಕೆಂಪಗೆ ಹುರಿದು ಅದಕ್ಕೆ ಮೆಣಸಿನ ಪುಡಿ ಸೇರಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು.
ದೊಡ್ಡ ಪಾತ್ರೆಯಲ್ಲಿ ಉಪ್ಪು ಮತ್ತು ೧ ಲೋಟ ನೀರು ಹಾಕಿ ಕುದಿಸಬೇಕು. ನೀರು ಕುದ್ದು ಅರ್ದ ಪ್ರಮಾಣಕ್ಕೆ ಬಂದಾಗ ಹೆಚ್ಚಿದ ಅಮ್ಟೆ ಹೋಳುಗಳನ್ನು ಹಾಕಿ ಒಂದೆರಡು ನಿಮಿಷ ಬೇಯಿಸಬೇಕು. ಪಾತ್ರೆಯನ್ನು ಕೆಳಗಿಟ್ಟು ತಣ್ಣಗಾಗಲು ಬಿಡಬೇಕು.
ಪೂರ್ಣ ತಣ್ಣಗಾದ ಮೇಲೆ, ಹುರಿದು ಪುಡಿ ಮಾಡಿದ ಸಾಸಿವೆ, ಮೆಂತ್ಯ ಹಾಗು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ, ಕೊಬ್ಬರಿ ಎಣ್ಣೆ, ಸಾಸಿವೆ ಹಾಗು ಇಂಗಿನ ಒಗ್ಗರಣೆ ಕೊಡಬೇಕು . ಸಂಪೂರ್ಣ ತಣ್ಣಗಾದ ಮೇಲೆ ಅಮಟೆಕಾಯಿ ಉಪ್ಪಿನಕಾಯಿಯನ್ನು ಶುಚಿಯಾದ ಗಾಜಿನ ಶೀಷೆಗೆ ತುಂಬಿ ಅದರ ಮುಚ್ಚಳ ಹಾಕಬೇಕು.
ಇದನ್ನು ಎರಡು ದಿನ ಬಿಟ್ಟು ಉಪಯೋಗಿಸಬಹುದು.
ಇಲ್ಲಿ ನಾನು ಎಂ.ಟಿ.ಆರ್ ಮೆಣಸಿನ ಹುಡಿ ಉಪಯೋಗಿಸಿದ್ದೇನೆ. ನೀವು ನಿಮ್ಮ ಇಷ್ಟದ ಹುಡಿಯನ್ನ ಉಪಯೋಗಿಸಬಹುದು.
ನೆನಪಿರಲಿ ಬಳಸುವ ಅಮಟೆಕಾಯಿ ಬಲಿತಿರಬಾರದು. ತುಂಬಾ ಎಳೆಕಾಯಿ ಉತ್ತಮ ರುಚಿ ಕೊಡುವುದು.
Showing posts with label ಶುಚಿರುಚಿ ಸಾಂಪ್ರದಾಯಿಕ. Show all posts
Showing posts with label ಶುಚಿರುಚಿ ಸಾಂಪ್ರದಾಯಿಕ. Show all posts
Wednesday, May 2, 2018
Subscribe to:
Posts (Atom)
Jack fruits Seeds Tikki
Jack fruits are healthy Seasonal fruits. The seeds also contain lots of good vitamins and minerals. After eating the fruit we throw away th...
About
My name is Nalini Somayaji. Teaching is my profession. Cooking is my passion. Reading, travelling, visiting new places, having fun with kids are some of the hobbies I can say. My recipes are Healthy, quick, easy and simple. Grown up being a traditional family member I love and respect Indian culture and traditions. Love classical dance and music.
Learn More →